ಸೋರುತ್ತಿದೆ ಶಾಲಾ ಕೊಠಡಿಮಕ್ಕಳ ಕಲಿಕೆಗೆ ತೊಂದರೆ


ಪ್ರಗತಿವಾಣಿ, ಯಲಬುರ್ಗಾ
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ
ತಾಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸೋರುತ್ತಿದ್ದು ಮಕ್ಕಳ ಕಲಿಕೆಗೆ ತೊಂದರೆಯಾಗಿದೆ.
ಶಾಲೆಯ ಎರಡು ಕೊಠಡಿಗಳ ಮೇಲೆ ನೀರು ಸಂಗ್ರಹಗೊಂಡು, ಮುಂದಕ್ಕೆ ಹರಿಯದೇ ನಿಂತಲ್ಲೇ ನಿಲ್ಲುತ್ತಿದ್ದು, ಕಟ್ಟಡ ಶಿಥಿಲಾವಸ್ಥೆಗೆ ಜಾರಿದೆ. ಸಂಗ್ರಹವಾದ ನೀರನ್ನು ಶಾಲಾ ಶಿಕ್ಷಕರಿಗೆ ತುಂಬಿ ಚೆಲ್ಲುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಮಕ್ಕಳಿಗೆ ಸಮಸ್ಯೆಯಾಗಿದ್ದು, ಬೇರೆ ಕೊಠಡಿಯೊಳಗೆ ಕುಳಿತು ಪಾಠ ಕೇಳಲು ವ್ಯವಸ್ಥೆ ಮಾಡಿದ್ದಾರೆ. ಸೋರುತ್ತಿರುವ ಕಟ್ಟಡ ದುರಸ್ತಿ ಮಾಡುವಂತೆ ಶಾಲಾ ಶಿಕ್ಷಕರು, ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿನಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಸೋರುವ ಕಟ್ಟಡ ದುರಸ್ತಿಗೊಳಿಸಬೇಕು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕೆಂದು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.
--
°°ಮಳೆಗಾಲದಲ್ಲಿ ಎರಡು ಶಾಲಾ ಕೊಠಡಿಗಳು ಸೋರುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. ಈ ಕುರಿತು ಗ್ರಾಪಂ ಪಿಡಿಒ ಗಮನಕ್ಕೆ ತರಲಾಗಿದ್ದು, ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರಸ್ತಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ.
-ಅಖಂಡಪ್ಪ ಮಾಯಾಚಾರಿ, ಮುಖ್ಯಶಿಕ್ಷಕ, ಸಹಿಪ್ರಾ ಶಾಲೆ, ಹೊಸಳ್ಳಿ.
--
°°ಹೊಸಳ್ಳಿ ಹಿರಿಯ ಪ್ರಾಥಮಿಕ ಶಾಲೆ ಮಳೆ ಬಂದರೆ ಸೋರುತ್ತಿದೆ. ಪರಿಣಾಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗುತ್ತಿದೆ. ಸೋರುತ್ತಿರುವ ಕಟ್ಟಡ ದುರಸ್ತಿ ಪಡಿಸುವಂತೆ ಸಂಬಂಧಿಸಿದ ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಕಡೆ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು.
-ರಾಜಶೇಖರ ಶ್ಯಾಗೋಟಿ, ಕರವೇ ಜಿಲ್ಲಾ ಕಾರ್ಯಾಧ್ಯಕ್ಷ, ಹೊಸಳ್ಳಿ.
--

0/Post a Comment/Comments