ಪ್ರಗತಿ ವಾಣಿ, ಕೊಪ್ಪಳ
ಯಲಬುರ್ಗಾ: ಆಶಾ ಕಾರ್ಯಕರ್ತೆಯರು ಕೋವಿಡ್ ಸುರಕ್ಷತಾ ಸಾಮಗ್ರಿ ಉಪಯೋಗ ಮಾಡಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಸ್ನೇಹಾ ಸಂಸ್ಥೆ ನಿರ್ದೇಶಕ ಟಿ.ರಾಮಾಂಜನೇಯ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ ಹಾಗೂ ಸ್ನೇಹಾ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಸುರಕ್ಷತಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಆರೋಗ್ಯ ರಕ್ಷಣೆಯ ಸೇವೆ ಮಾಡಿರುವುದು ಶ್ಲಾಘನೀಯ. ಕರೊನಾ ಲಸಿಕೆ ಹಾಕಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ. ಹಾಗೆ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು. ಸಂಸ್ಥೆಯಿಂದ ವಿತರಿಸಿದ ಸುರಕ್ಷತಾ ಕಿಟ್ ಸದ್ಬಳಕೆಯಾಗಲಿ ಎಂದು ಹೇಳಿದರು.
ಇದೇ ವೇಳೆ ೩೦೦ ಆಶಾ ಕಾರ್ಯಕರ್ತೆಯರಿಗೆ ಆಕ್ಸಿಮಿಟರ್, ಥರ್ಮಾಮೀಟರ್ಸ್, ಫೇಸ್ ಶೀಲ್ಡ್, ಸೋಪ್, ಸ್ಯಾನಿಟೈಜರ್, ಕ್ಲೀನಿಂಗ್ ಕ್ಲಾಥ್ ಸೇರಿದಂತೆ ಇತರ ಆರೋಗ್ಯ ಸುರಕ್ಷತಾ ಕಿಟ್ ವಿತರಿಸಲಾಯಿತು.
ಈ ಸಂದರ್ಭ ವೈದ್ಯಾಧಿಕಾರಿ ವಿ.ಪ್ರಕಾಶ್, ಹಿರಿಯ ಆರೋಗ್ಯ ಸುರಕ್ಷಿತ ಅಧಿಕಾರಿ ಮರಿತೆಂಗಮ್ಮ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶಿವರಾಜ ಹುಂಡೇಕರ್, ಆಶಾ ಮೆಂಟರ್ ಮಂಜುಳಾ, ಹನುಮಂತಪ್ಪ, ಸ್ನೇಹಾ ಸಂಸ್ಥೆ ಸಿಬ್ಬಂದಿ ಕೆ.ಗಾಯತ್ರಿ, ಶೋಭಾ, ಮಹಾಲಕ್ಷ್ಮಿ, ಶಾಕುಂತಲ ಸೇರಿದಂತೆ ಇನ್ನಿತರರಿದ್ದರು.
--
Post a Comment