ವೈದ್ಯರ ನಿಸ್ವಾರ್ಥ ಸೇವೆ ಸ್ಮರಣೀಯ


ಪ್ರಗತಿ ವಾಣಿ, ಯಲಬುರ್ಗಾ

ಸಮಾಜದಲ್ಲಿ ಸಾರ್ವಜರಿಕರ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಸೇವೆ ನಿಸ್ವಾರ್ಥ ಸೇವೆ ಮೆಚ್ಚಬೇಕು ಎಂದು ಜಿಪಂ ಮಾಜಿ ಸದಸ್ಯೆ ಶಕುಂತಲಾದೇವಿ ಮಾಲಿಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೋವಿಡ್೧೯ ಸಂದರ್ಭದಲ್ಲಿ ವೈದ್ಯರ ನಿಸ್ವಾರ್ಥ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ. ಸೋಂಕು ತಗುಲಿದ ವೇಳೆ ಜನರ ಆರೋಗ್ಯ ಕಾಪಾಡುವಲ್ಲಿ ಮನುಕುಲಕ್ಕೆ ನಿಜವಗಿಯೂ ದೇವರಾಗಿದ್ದಾರೆ. ಇಡೀ ವಿಶ್ವಕ್ಕೆ ವ್ಯಾಪಕವಾಗಿ ಕರೊನಾ ಹರಡಿದ ವೇಳೆ ಹತೋಟಿಗೆ ತರುವಲ್ಲಿ ವೈದ್ಯರ ಸೇವೆ ಸಾಕಷ್ಟಿದೆ ಎಂದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಚನ್ನಮ್ಮ ಪಾಟೀಲ್,  ಪಪಂ ಸದಸ್ಯೆ ನಂದಿತಾ ಶಿವನಗೌಡ ದಾನರಡ್ಡಿ ಮಾತನಾಡಿದರು.

ಈ ಸಂದರ್ಭ ವೈದ್ಯರಾದ ಸಂಗನಬಸಪ್ಪ, ಶೇಖರ ಭಜಂತ್ರಿ, ಮಾರುತಿ, ನವೀನ್ ಕರಂಡಿ, ಶಿಲ್ಪಾ, ಮೇಘನಾ, ಪ್ರಸಾದ್, ಕ್ಲಬ್ ಪದಾಧಿಕಾರಿಗಳಾದ ಜುಲೈಕಾ ಮುದಗಲ್, ಸ್ವರೂಪರಾಣಿ ಪಾಟೀಲ್, ಲತಾ ಕಲ್ಯಾಣಿ, ಸುನೀತಾ ಪತಂಗರಾಯ, ಶಾರದಾ ಕೊಣ್ಣುರು ಸೇರಿದಂತೆ ಇನ್ನಿತರರಿದ್ದರು.
--

0/Post a Comment/Comments