ಸಂಭ್ರಮದ ಬಕ್ರೀದ್ ಆಚರಣೆ

ಪ್ರಗತಿವಾಣಿ, ಯಲಬುರ್ಗಾ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಕ್ರೀದ್ ಹಬ್ಬದ ನಿಮಿತ್ಯ ಮುಸ್ಲಿಂ ಸಮುದಾಯದ ಬಾಂಧವರು ಭಾನುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಸಮಾಜದ ಧರ್ಮಗುರುಗಳಾದ ಹಜರತ್
ಸೈಯದ್ ಖಾಜಿ ಮಹ್ಮದ್ ಅಬ್ದುಲ್ ಖಾದರ್ ಅವರು ಬಕ್ರೀದ್ ಹಬ್ಬದ ಮಹತ್ವದ ಕುರಿತು ಉಪನ್ಯಾಸ ನೀಡಿ, ನಾಡಿನಲ್ಲಿ ಶಾಂತಿ, ಸೌಹಾರ್ದತೆ ಬೆಳಗಲಿ, ಎಲ್ಲರಿಗೂ ಅಲ್ಲಾಹನು ಸುಖ ಸಂತೋಷ, ಸಮೃದ್ಧಿ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಇದೇ ವೇಳೆ ಸಮಾಜದ ಮುಖಂಡರಾದ
ಮಹೆಬೂಬಸಾಬ ಮಕಾಂದರ್, ಇಕ್ಬಾಲ್ ಸಾಬ ವಣಗೇರಿ, ಅಕ್ತರಸಾಬ ಖಾಜಿ, ಅಖ್ತರಸಾಬ ವಣಗೇರಿ, ಮೌಲಾಹುಸೇನ ಬುಲ್ಡಿಯಾರ್, ಅಬ್ದುಲ್ ಮಕಾಂದರ್, ಅಯೂಬಸಾಬ ಕೊಪ್ಪಳ, ಎಂ.ಎಂ.ನಧಾಪ್, ರಿಯಾಜ್ ಖಾಜಿ, ಬಾಬುಸಾಬ ಪೊಲೀಸ್, ಮಹೆಬೂಬಸಾಬ ರಾಯಚೂರ, ಮೈನುಸಾಬ ವಣಗೇರಿ, ಜೀಲಾನಸಾಬ ಖಾಜಿ, ಇಮಾಮಸಾಬ ಸಂಕನೂರ, ಖಾಜಾವಲಿ ಜರಕುಂಟಿ, ಎಂ.ಡಿ.ಯೂಸುಫ್, ಖಾಸಿಂಸಾಬ ಸಂಕನೂರ, ಅಷ್ರಫ್ ಅಲಿಸಾಬ ನಿಟ್ಟಾಲಿ,ಬಾಬುಸಾಬ ಕೊತ್ವಾಲ್, ಪಾಶಾ ಗುಳೇದಗುಡ್ಡ, ಶರೀಪ್ ಕೊತ್ವಾಲ್, ಶಾಮೀದ್ ಆನೆಗೊಂದಿ, ಗುಲಾಂ ಅಹ್ಮದ್ ಖಾಜಿ, ಸೇರಿದಂತೆ ಸಮಾಜದ ಹಲವು ಗಣ್ಯರು, ಯುವಕರು ಪಾಲ್ಗೊಂಡಿದ್ದರು.
--

0/Post a Comment/Comments