ಮಾದರಿ ಕೆರೆ ನಿರ್ಮಾಣ ಮಾಡಿ
ಪ್ರಗತಿವಾಣಿ, ಯಲಬುರ್ಗಾ
ತಾಲೂಕಿನ ಗುನ್ನಾಳ, ಹಿರೇಅರಳಿಹಳ್ಳಿ, ವಜ್ರಬಂಡಿ, ಬಂಡಿ ಹಾಗೂ ಬಳೂಟಗಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳಲಾದ ಅಮೃತ ಸರೋವರ ಕಾಮಗಾರಿಯನ್ನು ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿ, ಅಮೃತ ಸರೋವರ ಯೋಜನೆಯ ಆಶಯದಂತೆ ಗ್ರಾಮೀಣ ಪ್ರದೇಶದಲ್ಲಿ ಸುಂದರವಾದ ಕೆರೆಗಳ ನಿರ್ಮಾಣವಾಗಬೇಕು. ಕೆರೆಯ ಸುತ್ತಲೂ ಗಾರ್ಡನ್, ವಿಶ್ರಾಂತಿ ಪಡೆಯುವ ಬೆಂಚ್‌ಗಳು, ವಾಕಿಂಗ್ ಟ್ರ್ಯಾಕ್, ಐಲ್ಯಾಂಡ್ ಮತ್ತು ಸುತ್ತಲೂ ತಂತಿಬೇಲಿ ಅಳವಡಿಸಿ, ಆಕರ್ಷಣೀಯ ಕೇಂದ್ರವಾಗಿ ಕಾಣುವಂತೆ ಮಾಡಬೇಕು. ಕುಡಿವ ನೀರು ಸದ್ಬಳಕೆಯಾಗುವ ಕೆರೆಗಳಿಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ನೋಡುಗರನ್ನು ಕೈಬೀಸಿ ಕರೆಯುವಂಥ ಕೆರೆಗಳು ತಾಲೂಕಿನಲ್ಲಿ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಈ ಸಂದರ್ಭ ಇಒ ಸಂತೋಷ ಬಿರಾದಾರ, ಸಹಾಯಕ ನಿರ್ದೇಶಕ ನಿಂಗನಗೌಡ, ತಾಂತ್ರಿಕ ಸಂಯೋಜಕ ಯಮನೂರ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಮುಖಂಡ ಅಯ್ಯನಗೌಡ ಕೆಂಚಮ್ಮನವರ್, ಗ್ರಾಪಂ ಪಿಡಿಒಗಳಾದ ಪ್ರಕಾಶ, ಸೋಮಪ್ಪ ಪೂಜಾರ, ರಾಮಣ್ಣ ಹೊಸಮನಿ, ನಾಗೇಶ ನಾಯ್ಕ, ಫಯಾಜ್ ಹಾಗೂ ಟಿಎಇ, ಬಿಎಫ್‌ಟಿ ಸೇರಿದಂತೆ ಇನ್ನಿತರರಿದ್ದರು.
---------------
Post a Comment