ಯಲಬುರ್ಗಾದಲ್ಲಿ ಜು.28 ರಂದು ಪತ್ರಿಕಾ ದಿನಾಚರಣೆ, ಪದಗ್ರಹಣ ನಿರ್ಧಾರ

ಪ್ರಗತಿ ವಾಣಿ, ಕೊಪ್ಪಳ
ಯಲಬುರ್ಗಾ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ವತಿಯಿಂದ ಪಟ್ಟಣದ ಸರ್ಕಿಟ್ ಹೌಸ್‌ ನಲ್ಲಿ ಅಧ್ಯಕ್ಷ ಶಿವಮೂರ್ತಿ ಇಟಗಿ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ಜರಗಿತು.
ಇದೇ ಜು.28 ರಂದು ಯಲಬುರ್ಗಾದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಒಂದು ಕಾರ್ಯಕ್ರಮವನ್ನು ವಿಶಿಷ್ಟವಗಿ ಆಚರಿಸುವುದು ಸೇರಿದಂತೆ, ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಉಳಿದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗ್ರಾಮೀಣ ಉಪಾಧ್ಯಕ್ಷರನ್ನಾಗಿ ಸಂತೋಷ ಬಂಡ್ರಿ, ಸಹ ಕಾರ್ಯದರ್ಶಿಯಾಗಿ ಮಹಾಂತೇಶ ಛಲವಾದಿ, ಉಳಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮಶಂಕರ ಹಿರೇಮಠ, ರವಿ ಛಲವಾದಿ, ಸ.ಶರಣಪ್ಪ ಪಾಟೀಲ, ವೀರೇಶ ಸ್ಟಾಂಪಿನ್, ಸದಾಂ ಹುಸೇನ್ ಸಂಕನೂರು, ದೊಡ್ಡಬಸಪ್ಪ ಹಕಾರಿ,
ಶಿವು ಮ್ಯಾಗೇರಿ, ಶ್ಯಾಮೀದಸಾಬ ತಾಳಕೇರಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಂತರ ಆಯ್ಕೆಗೊಂಡವರನ್ನು ಗೌರವಿಸಲಾಯಿತು.ಸಂಘದ ಜಿಲ್ಲಾ ಸದಸ್ಯ ವ್ಹಿ.ಎಸ್.ಶಿವಪ್ಪಯ್ಯನಮಠ, ತಾಲೂಕು ಕಾ.ನಿ.ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಇಮಾಮಸಾಬ ಸಂಕನೂರು,ಉಪಾಧ್ಯಕ್ಷರಾದ ಶಿವಪುತ್ರಯ್ಯ ಹಿತ್ತಲಮನಿ,ವೀರಣ್ಣ ತೋಟದ, ಚಂದ್ರಶೇಖರ ಮರದಡ್ಡಿ,ಸಂಘಟನೆ ಕಾರ್ಯದರ್ಶಿ ನೀಲಪ್ಪ ಖಾನಾವಳಿ,ಖಜಾಂಚಿ ಭೀಮಪ್ಪ ಹವಳಿ ಮತ್ತಿತರರು ಉಪಸ್ಥಿತರಿದ್ದು,ಸಲಹೆ ಸೂಚನೆ ನೀಡಿದರು. ಕೊನೆಗೆ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾಟರಂಗಿ ಸ್ವಾಗತಿಸಿ, ವಂದಿಸಿದರು.
--

0/Post a Comment/Comments