ವಿದ್ಯಾರ್ಥಿಗಳಿಗೆ ಸಸಿ ವಿತರಣೆ

ಪ್ರಗತಿ ವಾಣಿ ಸುದ್ದಿ ಯಲಬುರ್ಗಾ
ಮನುಷ್ಯ ಜಿವಿಸಬೇಕಾದರೆ ಉತ್ತಮ ಗಾಳಿ ಮಳೆಯ ಅವಶ್ಯಕತೆ ಇದ್ದು, ಅದು ಒಳ್ಳೆಯ ಪರಿಸರದಿಂದ ಮಾತ್ರ ಸಾಧ್ಯ ಎಂದು ಸಂಸ್ಥೆಯ ಕಾರ್ಯದರ್ಶಿ ಸುನಿಲ್‌ಕುಮಾರ್ ಬೆಲ್ಲದ ಹೇಳಿದರು.
ಸಮೀಪದ ರ್ಯಾವಣಕಿ ಹೊರ ವಲಯದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅನ್ವಿತಾ ಮಹಿಳೆಯರ ವೃದ್ಧರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ (ಅವಾರ್ಡ್ ಸೊಸೈಟಿ) ಸಂಸ್ಥೆಯಿಂದ ಭಾನುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಚ್ಚೆಚ್ಚು ಸಸಿ ನೆಟ್ಟು ಪೋಷಿಸುವುದರಿಂದ ಪರಿಸರ ಉಳಿಯಲು ಸಹಕಾರಿಯಾಗುತ್ತದೆ ಎಂದರು. ಮುಖ್ಯಶಿಕ್ಷಕ ಅಶೋಕ ಮಾದಿನೂರು, ಮುಖಂಡ ಮಂಜುನಾಥ ಪೂಜಾರ ಮಾತನಾಡಿದರು. ಗ್ರಾಪಂ ಸದಸ್ಯ ಬಸಪ್ಪ ತಳವಾರ್ ಅಧ್ಯಕ್ಷತೆ ವಹಿಸಿದ್ದರು.

ಪರಿಸರ ದಿನದ ಅಂಗವಾಗಿ ಪ್ರತಿ ಮಕ್ಕಳಿಗೆ  ಒಂದೊಂದು ಸಸಿ ದತ್ತು ನೀಡಿ, ಗಿಡಕ್ಕೆ ಮಗುವಿನ ಹೆಸರು ಇಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭ ಇಂದಿರಾ ಗಾಂಧಿ ವಸತಿ ಶಾಲೆಯ ವಾರ್ಡನ್ ಸಹೇಬಗೌಡ ರುದ್ರಪ್ಪನವರ್, ಗ್ರಾಪಂ ಸದಸ್ಯ ಕಲ್ಲಪ್ಪ ದೇವರ, ಅತಿಥಿ ಉಪನ್ಯಾಸಕ ಬಸವರಾಜ ಹುಲಿ, ಮುಖಂಡರಾದ ಭೀಮಣ್ಣ ಬುದಗುಂಪಿ, ಗುದ್ನೆಪ್ಪ ಉಂಡಿ, ವಸತಿ ಶಾಲೆಯ ಸಿಬ್ಬಂದಿ ವೀರಣ್ಣ ಹೊಸಮನಿ, ಯುವಕರಾದ ಕನಕಪ್ಪ ತಳವಾರ, ಪ್ರಕಾಶ ಹಾಳಕೇರಿ, ಲೋಹಿತ್ ದೇವರ, ಮೀರಜ್ ಕಿಲ್ಲೆದ ಸೇರಿದಂತೆ ಇನ್ನಿತರರಿದ್ದರು.

0/Post a Comment/Comments