ಸಿಡಿಲಿಗೆ ಇಬ್ಬರು ಮಹಿಳೆಯರು ಬಲಿ

ಪ್ರಗತಿ ವಾಣಿ ಸುದ್ದಿ ಯಲಬುರ್ಗಾ
ಹೊಲದಲ್ಲಿ ಕಳೆ ಕೀಳುವ ಕೆಲಸದಲ್ಲಿ ತೊಡಗಿದ ವೇಳೆ ಸಿಡಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ನಡೆದಿದೆ.
ದೇವವ್ವ ಗಂಡ ಯಮನಪ್ಪ‌ ಮುದೇನೂರ  (55), ರೇಷ್ಮಾ ಗಂಡ ಕೊಟ್ರೇಶ ಛಲವಾದಿ (27) ಮೃತರು.
ಮಳೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜಮೀನಿನ ಬದುವಿನಲ್ಲಿರುವ ಮಾವಿನ ಮರದ ಕೆಳೆಗಡೆ ನಿಂತಿರುವ ಸಂದರ್ಭದಲ್ಲಿ
ಸಿಡಿಲು ಬಡಿದು ಮೃತರಾಗಿದ್ದಾರೆ.
ಹನಮಪ್ಪ‌‌ ತಂದೆ ಕನಕಪ್ಪ ಛಲವಾದಿ ಜಮೀನಿಗೆ ಕಳೆ ಕೀಳುಬ ಕೆಲಸಕ್ಕೆ ಹೋಗಿದ್ದರು. ಸಿಡಿಲಿನ‌ ಪ್ರಕರತೆಯಿಂದ 
ಯಮನವ್ವ ಬಸಪ್ಪ ಮುದೇನೂರ,
ಅನ್ನಕ್ಕ ಹನುಮಪ್ಪ ಛಲವಾದಿ, ರತ್ನವ್ವ ಮಂಜಪ್ಪ ಸುಣಗಾರ ತೀವ್ರ ಗಾಯಗೊಂಡಿದ್ದು ಇವರನ್ನು ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
--

0/Post a Comment/Comments