ಜಗಮೆಚ್ಚಿದ ನಾಯಕ ನರೇಂದ್ರ ಮೋದಿ

ಪ್ರಗತಿವಾಣಿ ಸುದ್ದಿ ಯಲಬುರ್ಗಾ
ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ೮ ವರ್ಷ ಪೂರೈಸಿದ್ದು, ದೇಶ ಸಾಕಷ್ಟು ಪ್ರಗತಿ ಕಂಡಿದೆ ಎಂದು ಸಚಿವ ಹಾಲಪ್ಪ ಆಚಾರ್ ವಿಶ್ವಾಸ ವ್ಯಕ್ತ ಪಡಿಸಿದರು.

ಪಟ್ಟಣದ ಶಾಸಕರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕರೊನಾ ಮಹಾಮಾರಿ ಭಾರತವಲ್ಲದೇ ಇಡೀ ಜಗತ್ತನ್ನೇ ಬಾಧಿಸುತ್ತಿದೆ. ಈ ನಡುವೆ ಬಿಜೆಪಿ ಸರ್ಕಾರ ದೇಶದ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಭದ್ರತೆ ಕಲ್ಪಿಸುವ ಜತೆಗೆ ಅನೇಕ ಜನಪರ ಯೋಜನೆ ಜಾರಿಗೊಳಿಸಿ ಶ್ರಮಿಸುತ್ತಿದೆ. ಎಲ್ಲ ವರ್ಗದವರಿಗೂ ಪೂರಕ ಕಾರ್ಯಕ್ರಮ ಜಾರಿ ಮಾಡಿರುವ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದರು.

ಆಯುಷ್ಮಾನ್ ಭಾರತ ಯೋಜನೆ, ಉಜ್ವಲಾ ಯೋಜನೆ, ಉಚಿತ ಗ್ಯಾಸ್ ಸಂಪರ್ಕ, ರೈತರಿಗಾಗಿ ಪಿಎಂ ಕಿಸಾನ್ ಯೋಜನೆ, ಪಿಎಂ ಜೀವನ್ ಜ್ಯೋತಿ ಭೀಮಾ ಯೋಜನೆ, ಸುರಕ್ಷಾ ಭೀಮಾ ಯೋಜನೆ ಸೇರಿದಂತೆ ಇನ್ನೂ ಅನೇಕ ಜನಪರ ಯೋಜನೆ ಜಾರಿಗೆ ತಂದು ದೇಶವಾಸಿಗಳ ಶ್ರೇಯೋಭಿವೇದ್ಧಿಗೆ ಶ್ರಮಿಸುತ್ತಿದೆ ಎಂದರು.
ಪ್ರಧಾನಿ ಮೋದಿ ಈ ದೇಶ ಕಂಡ ಅಪ್ರತಿಮ ನಾಯಕರಾಗಿದ್ದು, ವಿಶ್ವವೇ ಮೆಚ್ಚುವಂತಹ ಅಗ್ರಗಣ್ಯ ನಾಯಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ ಮೋದಿ ಸರ್ಕಾರದ ೮ ವರ್ಷದ ಸಾಧನೆಗಳನ್ನು ವಿವರವಾಗಿ ಹೇಳಿದರು.

ಈ ಸಂದರ್ಭ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಉಪಾಧ್ಯಕ್ಷೆ ಶಾಂತಾ ಮಾಟೂರು, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ್, ಪ್ರಮುಖರಾದ ಸಿ.ಎಚ್.ಪಾಟೀಲ್‌, ಬಸಲಿಂಗಪ್ಪ ಭೂತೆ, ವಿಶ್ವನಾಥ ಮರಿಬಸಪ್ಪನವರ್, ಶಿವಪ್ಪ ವಾದಿ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಸಿದ್ರಾಮೇಶ ಬೇಲೇರಿ, ಈರಪ್ಪ ಬಣಕಾರ, ದೊಡ್ಡಯ್ಯ ಗುರುವಿನ್ ಇದ್ದರು.
-----

0/Post a Comment/Comments