*ಮುಧೋಳದಲ್ಲಿ ನಡೆಯುತ್ತಿರುವ ಅಮೃತ ಸರೋವರ ಕೆರೆ ವೀಕ್ಷಿಸಿದ ಜಿಪಂ ಸಿಇಒ

ಪ್ರಗತಿ ವಾಣಿ ಯಲಬುರ್ಗಾ 

ಯಲಬುರ್ಗಾ: ಅಜಾದಿಕಾ ಅಮೃತ ಸರೋವರ ಯೋಜನೆಯಡಿ ಕೆರೆಗೆ ನಿರ್ಮಾಣ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳು ತುರ್ತಾಗಿ ಮುಗಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಫೌಜಿಯಾ ತರನ್ನುಮ್ ಅವರು ತಿಳಿಸಿದರು.
ಶನಿವಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ  ಕೆರೆಯನ್ನು ನರೇಗಾ ಯೋಜನೆಯಡಿ ಅಮೃತ ಸರೋವರ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ಮುಧೋಳ ಕೆರೆಯ ಹೂಳು ತೆಗೆಸಬೇಕು. ಕೆರೆಯ ಏರಿಯಲ್ಲಿ ವಾಕಿಂಗ್ ಪಾತ್ ಮಾಡಬೇಕು. ವಿಶ್ರಾಂತಿ ಪಡೆಯಲು ಬೆಂಜ್ ಗಳನ್ನು ಹಾಕಬೇಕು. ಹಾಗೇ ಸೋಲಾರ್ ಲೈಟ್ ಅಳವಡಿಸಬೇಕು. ಕೆರೆಯ ಸುತ್ತ ತಂತಿಬೇಲಿ ಹಾಕಬೇಕು. ಈ ಎಲ್ಲ ಕಾಮಗಾರಿಗಳು ತುರ್ತಾಗಿ ಆಗಬೇಕು ಎಂದು ತಿಳಿಸಿದರು. ಹಾಗೇ ಮುಧೋಳ ಘನ ತ್ಯಾಜ್ಯ ನಿರ್ವಹಣ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಒಂದುವಾರದಲ್ಲಿ ಎಲ್ಲ ಸರಿಪಡಿಸಬೇಕು ಎಂದು ಗ್ರಾಮ ಪಂಚಾಯತಿ ಕಾರ್ಯದರ್ಶಿಯವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ  ಯಲಬುರ್ಗಾ ತಾಲೂಕಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದಾರ್ ಪಾಟೀಲ್, ಮಾನ್ಯ ಸಹಾಯಕ ನಿರ್ದೇಶಕರಾದ ಗೀತಾ ಅಯ್ಯಪ್ಪ, ನಿಂಗನಗೌಡ, ತಾಂತ್ರಿಕ ಸಂಯೋಜಕರಾದ ಯಮನೂರ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಗ್ರಾಪಂ ಕಾರ್ಯದರ್ಶಿಗಳು, ಕರವಸೂಲಿಗಾರರು, ಸದಸ್ಯರು ಹಾಜರಿದ್ದರು.

 *ತಾಲೂಕು ಐಇಸಿ ಸಂಯೋಜಕರು ಯಲಬುರ್ಗಾ*

0/Post a Comment/Comments