ಕೂಲಿಕಾರರಿಗೆ ಬೂಸ್ಟರ್ ಡೋಸ್ ಲಸಿಕೆ ಜಲಮೂಲಗಳ ಸಂರಕ್ಷಣೆ ಅವಶ್ಯ: ಐಇಸಿ ಸಂಯೋಜಕ ಶರಣಪ್ಪ


ಯಲಬುರ್ಗಾ
ಉದ್ಯೋಗ ಖಾತ್ರಿ ಯೋಜನೆಯಡಿ ಜಲಮೂಲಗಳ ಸಂರಕ್ಷಿಸುವ ಸಲುವಾಗಿ ನಾಲಾ, ಕೆರೆ ಹೂಳೆತ್ತುವುದರಿಂದ ಅಂತರ್ಜಲಮಟ್ಟ ಹೆಚ್ಚಾಗಲಿದೆ ಎಂದು ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಹೇಳಿದರು.

ತಾಲೂಕಿನ ಸಂಕನೂರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ ಅಭಿಯಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಭೂಮಿಯಲ್ಲಿ ಅಂತರ್ಜಲಮಟ್ಟ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿರುವ ನಾಲಾ, ಕೆರೆ, ಬದು, ಕುಂಟೆ, ಕಟ್ಟೆ ಮುಂತಾದವುಗಳನ್ನು ಅಭಿವೃದ್ಧಿಪಡಿಸಿ ಮಳೆ ನೀರು ಇಂಗುವಂತೆ ಮಾಡುವುದರ ಜತೆಗೆ ಕೂಲಿಕಾರರಿಗೆ ಕೆಲಸ ಸಿಗಲಿದೆ ಎಂದರು.
ಈ ಬಾರಿ ಕೇಂದ್ರ ಸರ್ಕಾರ ಕೂಲಿಕಾರರ ಮೊತ್ತ 309ಕ್ಕೆ ಹೆಚ್ಚಳ ಮಾಡಿದೆ. ಆ್ಯಪ್ ಎನ್ಎಂಎಂಎಸ್ ಹಾಜರಾತಿ ಕಡ್ಡಾಯ ಮಾಡಿದೆ. ಅದರಂತೆ ಕೂಲಿಕಾರರು ಮಧ್ಯಾಹ್ನ ೨.೩೦ರ ವರೆಗೆ ಕಾಮಗಾರಿ ಸ್ಥಳದಲ್ಲಿ ಇದ್ದು ಕಡ್ಡಾಯವಾಗಿ ಹಾಜರಾತಿ ಹಾಕಿಸಬೇಕುಎಂದು ತಿಳಿಸಿದರು.

ಈ ವೇಳೆ ಆರೋಗ್ಯ ಸಿಬ್ಬಂದಿ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಆರೊಗ್ಯ ತಪಾಸಣೆ ಶಿಬಿರ ನಡೆಸಿ, ಬೂಸ್ಟರ್ ಡೋಸ್ ಹಾಗೂ ಬಿಪಿ, ಶುಗರ್ ಪರೀಕ್ಷೆ ಮಾಡಿದರು.

ಈ ಸಂದರ್ಭ ಗ್ರಾಪಂ ಸದಸ್ಯೆ ಫಾತಿಮಾ ಖಾಜಾಸಾಬ್ ಅಮರಾವತಿ, ಸಿಬ್ಬಂದಿ ತಿಪ್ಪಣ್ಣ ಗುರಿಕಾರ್, ಭೀಮರಾವ್ ದೇಸಾಯಿ, ವಿಜಯಕುಮಾರ್, ಕಾಯಕ ಮಿತ್ರರಾದ ಜಯಶ್ರೀ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.
-----

0/Post a Comment/Comments