ಪ್ರಗತಿ ವಾಣಿ ನ್ಯೂಸ್ ಯಲಬುರ್ಗಾ
ಸರಳ ಮತ್ತು ಸಾಮೂಹಿಕ ವಿವಾಹಗಳು ಬಡವರಿಗೆ ಸಹಕಾರಿಯಾಗಿವೆ ಎಂದು ಪಿಎಸ್‌ಐ ಶಿವಕುಮಾರ ಮುಗ್ಗಳ್ಳಿ ಹೇಳಿದರು.
ಪಟ್ಟಣದ ಶ್ರೀಮೊಗ್ಗಿಬಸವೇಶ್ವರ ಜಾತ್ರೋತ್ಸವ ನಿಮಿತ್ತ ಜಾತ್ರಾ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವ ದಂಪತಿಗಳು ಜೀವನದಲ್ಲಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಿ, ಉತ್ತಮ ಬದುಕು ಕಟ್ಟಿಕೊಳ್ಳುವುದರ ಜತೆಗೆ ಮಾದರಿಯಾಗಬೇಕು ಎಂದರು.
ಪಟ್ಟಣದ ಮೊಗ್ಗಿಬಸವೇಶ್ವರ ಜಾತ್ರೋತ್ಸವ ಐತಿಹಾಸಿಕ, ಧಾರ್ಮಿಕತೆಗೆ ಹೆಸರಾಗಿದೆ. ಸಾಮೂಹಿಕ ವಿವಾಹ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸುವ ಮೂಲಕ ಸಾಮರಸ್ಯ ಸಾರುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಎಂದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ, ಸತಿ ಪತಿಗಳು ಹಿರಿಯರನ್ನು ಗೌರವದಿಂದ ಕಾಣಬೇಕು. ಆದರ್ಶ ದಂಪತಿಗಳಾಗಿ ಹೊರಹೊಮ್ಮಬೇಕು ಎಂದರು. ಮುಖಂಡರಾದ ಸುರೇಶಗೌಡ ಶಿವನಗೌಡ್ರ, ಶಕುಂತಲಾದೇವಿ ಮಾಲಿಪಾಟೀಲ್, ಷಣ್ಮುಖಪ್ಪ ರಾಂಪೂರ, ಕಲ್ಲನಗೌಡ ಓಜನಹಳ್ಳಿ ಮಾತನಾಡಿದರು.
ಪಟ್ಟಣದ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ನವಜೋಡಿಗಳಿಗೆ ಆಶೀರ್ವದಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಜಾತ್ರಾ ಸಮಿತಿ ಅಧ್ಯಕ್ಷ ಅಮರಪ್ಪ ಕಲಬುರ್ಗಿ, ಪಪಂ ಉಪಾಧ್ಯಕ್ಷೆ ಶಾಂತಾ ಮಾಟೂರು, ಸದಸ್ಯರಾದ ರೇವಣಪ್ಪ ಹಿರೇಕುರುಬರ, ಬಸಲಿಂಗಪ್ಪ ಕೊತ್ತಲ್, ಪ್ರಮುಖರಾದ ಸಂಗಣ್ಣ ತೆಂಗಿನಕಾಯಿ, ಅಂದಾನಗೌಡ ಉಳ್ಳಾಗಡ್ಡಿ, ಅನಿಲ್ ಆಚಾರ್, ಶಿವಕುಮಾರ ನಾಗಲಾಪುರಮಠ, ದಾನನಗೌಡ ತೊಂಡಿಹಾಳ, ಕೆ.ಜಿ.ಪಲ್ಲೇದ್, ಬಸವರಾಜ ಅಧಿಕಾರಿ, ಗುಡದೀರಪ್ಪ ಕಜ್ಜಿ, ಲಲಿತಾ ನಾಯ್ಕ, ಬಸಯ್ಯ ಮೈಸೂರಮಠ, ಮೈಬುಸಾಬ್ ಮಕಾಂದಾರ್, ಶಿವು ಕುಂಬಾರ, ವಿರೂಪಾಕ್ಷಯ್ಯ ಗಂಧದ, ಮಂಜುನಾಥ ಅಧಿಕಾರಿ, ಕಳಕೇಶ್ ಅರಕೇರಿ ಇನ್ನಿತರರಿದ್ದರು.
Post a Comment