ರಂಗಭೂಮಿ ಕಲೆ ಉಳಿವಿಗೆ ಕೈಜೋಡಿಸಿ


ಪ್ರಗತಿ ವಾಣಿ ಯಲಬುರ್ಗಾ
ರಂಗಭೂಮಿ ಕಲೆ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ಯುಥ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಅಟಮಾಳಗಿ ಹೇಳಿದರು.

ತಾಲೂಕಿನ ಗೆದಗೇರಿ ಗ್ರಾಮದ ಶ್ರೀ ದ್ಯಾಮಾಂಬಿಕಾದೇವಿ ಜಾತ್ರೋತ್ಸವ ಅಂಗವಾಗಿ ವಿಜಯಮಹಾಂತೇಶ್ವರ ಯುವ ನಾಟ್ಯ ಸಂಘದಿಂದ ಏರ್ಪಡಿಸಿದ್ದ ಅಣ್ಣನ ಅರಮನೆ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.
ಗೆದಗೇರಿ ಗ್ರಾಮ ಕಲಾವಿದರ ಬೀಡಾಗಿದ್ದು, ಯುವಕಲಾವಿದರು ರಂಗಭೂಮಿ ಪೋಷಿಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ. ಸಮಾಜದ ಅಂಕು ಡೊಂಕು ತಿದ್ದುವಲ್ಲಿ ರಂಗಭೂಮಿ ಕಲೆ ಪಾತ್ರ ಬಹುಮುಖ್ಯವಾಗಿದೆ ಎಂದರು.

ಕುಷ್ಟಗಿ ತಾಪಂ ಸಹಾಯಕ ನೀರ್ದೇಶಕ ಹನುಮಂತಗೌಡ ಪಾಟೀಲ್ ಮಾತನಾಡಿದರು. ಶಿವಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪ್ರಮುಖರಾದ ಜಗದೀಶ ಬಳಿಗಾರ, ಶರಣಪ್ಪ ರಾಜೂರು, ಕಳಕಯ್ಯ ಹಿರೇಮಠ, ವಂಕಟೇಶ ಗೊಲ್ಲರ, ಬಸವರಾಜ ಬಂಡಿಹಾಳ, ಹನುಮಗೌಡ ಕೋಳಿಹಾಳ, ರುದ್ರಪ್ಪ ನಡೂಲಮನಿ, ದೇವರಾಜ ಹೊಸಮನಿ, ಗಣೇಶ ರಾಠೋಡ, ಶಿಕ್ಷಕ ಶರಣಪ್ಪ ಇಟಗಿ, ಬಸವರಾಜ ಹಳಗೌಡ್ರ, ಅಶೋಕ ಕೋಳಿಹಾಳ, ಶೇಖರಪ್ಪ ಹಳಗೌಡ್ರ ಇತರರಿದ್ದರು.

1/Post a Comment/Comments

Post a Comment