ಯಲಬುರ್ಗಾ:
ತಾಲೂಕಿನ ಬೇವೂರು ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಬುಧವಾರ ಸಾಯಂಕಾಲ ಭೇಟಿ ನೀಡಿದರು.
ಬಳಿಕ ಮಾತನಾಡಿದ ಅವರು, ಬೇವೂರು ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕು ಮತ್ತು ತರಲಕಟ್ಟಿ,ಹುಣಸಿಹಾಳ ಗ್ರಾಮವನ್ನು ಗ್ರಾಮ ಪಂಚಾಯಿತಿ ರಚನೆ ಮಾಡಲು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಾಲಪ್ಪ ಆಚಾರ ಅವರಿಗೆ ಒತ್ತಾಯಿಸಿ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ, ಪ್ರಧಾನ ಕಾರ್ಯದರ್ಶಿ ಸಿದ್ದು ಮಣ್ಣಿನವರ್, ಮುಖಂಡರಾದ ಶಿವ ಶಂಕರರಾವ್ ದೇಸಾಯಿ, ವೀರಣ್ಣ ಹಳ್ಳಿ, ಶ್ರೀಕಾಂತಗೌಡ ಮಾಲಿ ಪಾಟೀಲ್, ದ್ಯಾಮಣ್ಣ ಹಳ್ಳಿ, ಈಶಪ್ಪ ಹಿರೇಮನಿ,ಮಲ್ಲಪ್ಪ ಬುಡ್ಡನಗೌಡ್ರ, ಹನುಮಂತಪ್ಪ ಗುರಿಕಾರ ದುರ್ಗಪ್ಪ ಮಾಳಪ್ಪನವರ,ಶೇಖರಪ್ಪ ತೋಟದ ದೇವಪ್ಪ ಬಡ್ಡಿ,ರವಿ ಚರಾರಿ,ಯಮನಪ್ಪ ಉಪ್ಪಾರ,ಅಂದಾನಗೌಡ ಪಾಟೀಲ್,ಮಲ್ಲೀಕಾರ್ಜುನ ಕೋಳಜಿ, ಸೇರಿದಂತೆ ಮತ್ತಿತರ ಉಪಸ್ಥಿತರಿದ್ದರು.
---------------------------------
Post a Comment