ಸುತ್ತಮುತ್ತಲಿನ ವಾತಾವರಣ ಶುಚಿಯಾಗಿಟ್ಟುಕೊಳ್ಳಿ:ಗ್ರಾಪಂ ಅಧ್ಯಕ್ಷೆ ಶಾಂತಾ ಶರಣು ಹಾವೇರಿ

ಪ್ರಗತಿವಾಣಿ-ಯಲಬುರ್ಗಾ
ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ಶಾಂತಾ ಶರಣು ಹಾವೇರಿ ಹೇಳಿದರು.
ತಾಲೂಕಿನ ಮುರಡಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರಾಪಂ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕುಡಿವ ನೀರಿನ ಮೇಲ್ತೊಟ್ಟಿಗಳ ಸ್ವಚ್ಛತೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಚ್ಛತೆ ಅಭಿವೃದ್ಧಿ ಮತ್ತು ನಾಗರಿಕತೆಯ ಪ್ರತೀಕವಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸರ್ಕಾರ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ವಿಂಗಡಿಸಿ, ವಿಲೇವಾರಿಗೆ ಸಹಕರಿಸಬೇಕು. ಅಂದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸಬೇಕು ಎಂದರು.
ಇದೇ ವೇಳೆ ಮುರಡಿಯಲ್ಲಿ ಕುಡಿವ ನೀರಿನ ಮೇಲ್ತೋಟ್ಟಿ ಶುಚಿಗೊಳಿಸುವ ಮೂಲಕ ಸುತ್ತಲೂ ಬೆಳೆದ ಕಸಕಡ್ಡಿ ಸ್ವಚ್ಛಗೊಳಿಸಿ, ಮಲೀನತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಬಸವರಾಜ ಮಾಳಿ, ಬೇವೂರು ಪಿಎಚ್‌ಸಿ ವೈದ್ಯಾಧಿಕಾರಿ ನೇತ್ರಾ, ಹಿರಿಯ ಆರೋಗ್ಯ ಮೇಲ್ವಿಚಾರಕಿ ಸರ್ವಮಂಗಳ ಜತ್ತಿ, ಪಿಎಚ್‌ಸಿಒ ಸರೋಜಿನಿ ಕರಿಬಸವ ಶೆಟ್ಟರ್, ಕರವಸೂಲಿಗಾರ ಗಿರಿಯಪ್ಪ ಗುಜ್ಜಲರ, ಸಿಬ್ಬಂದಿ ರವಿ ಚಲವಾದಿ, ಹನುಮೇಶ ಗುಜ್ಜಲ್, ಆಶಾ ಕಾರ್ಯಕರ್ತೆಯರಾದ ಶರಣಮ್ಮ ತಳವಾರ್, ಹನುಮವ್ವ ವಾಲ್ಮೀಕಿ ಇದ್ದರು.

0/Post a Comment/Comments