ದ್ಯಾಮಮ್ಮ ದೇವಿ ಉತ್ಸವ ಅದ್ಧೂರಿ: ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೋತ್ಸವ

ಪ್ರಗತಿವಾಣಿ ವಿಶೇಷ ಯಲಬುರ್ಗಾ
ಪಟ್ಟಣದ ಶ್ರೀದ್ಯಾಮಮ್ಮ ಜಾತ್ರೋತ್ಸವ ನಿಮಿತ್ತ ಎರಡನೇ ದಿನವಾದ ಶನಿವಾರದಂದು ದೇವಿಯ ಉತ್ಸವ ಅದ್ಧೂರಿಯಾಗಿ ನಡೆಯಿತು.
ಶುಕ್ರವಾರ ರಾತ್ರಿ ಶ್ರೀವಿಜಯ ದುರ್ಗಾದೇವಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದ ದೇವಿಯು ಶನಿವಾರ ಪಟ್ಟಣದ ವಿವಿಧ ಭಕ್ತರ ಮನೆಗೆ ಪೂಜೆಗೆ ತೆರಳಿದಳು. ಕುರುಬರ ಓಣಿ, ಛಲವಾದಿ ಓಣಿ ಹಾಗೂ ತಾಂಡಾ ಸೇರಿದಂತೆ ನಾನಾ ಭಕ್ತರ ಮನೆಗಳಿಗೆ ದೇವಿಯ ಉತ್ಸವ ಸಾಗಿತು. ಮಧ್ಯಾಹ್ನ ಬಸರಿಕಟ್ಟಿ (ಉಪ್ಪಾರ ಓಣಿ) ಮೇಲೆ ವಾಸ್ತವ್ಯ ಮಾಡಿ, ಬಳಿಕ ಭಕ್ತರ ಮನೆ ಮನಗೆಳಿಗೆ ತೆರಳಿ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ರಾತ್ರಿ ವೇಳೆ ಗಾಣಿಗೇರ ಓಣಿಯಲ್ಲಿ ವಾಸ್ತವ್ಯ ಹೂಡಲಾಯಿತು. ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ದೇವಿಯ ಜಾತ್ರೆ ಪ್ರಯುಕ್ತ ಪಟ್ಟಣದ ಬಸರಿಕಟ್ಟೆ ಹತ್ತಿರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ಅಂದಾನಗೌಡ ಉಳ್ಳಾಗಡ್ಡಿ ಮಾತನಾಡಿ, ದ್ಯಾಮಮ್ಮ ದೇವಿಯ ಎರಡನೇ ದಿನದ ಉತ್ಸವ ನಡೆಯುತ್ತಿದ್ದು, ನಾನಾ ವಾರ್ಡ್ಗಳಲ್ಲಿ ಸಂಚರಿಸುವ ಮೂಲಕ ಭಕ್ತರಿಂದ ಪೂಜೆಗೊಳ್ಳುತ್ತಿದ್ದಾಳೆ. ಇನ್ನೂ ಮುರು ದಿನಗಳ ಕಾಲ ಅಮ್ಮನ ಜಾತ್ರೆ ನಡೆಯಲಿದೆ ಎಂದರು.
ಈ ಸಂದರ್ಭ ಪ್ರಮುಖರಾದ ಅಮರಪ್ಪ ಕುಲಕರ್ಣಿ, ಸಂಗಣ್ಣ ತೆಂಗಿನಕಾಯಿ, ಪಿ.ಟಿ.ಉಪ್ಪಾರ, ಕುಬೇರಗೌಡ ಮಾಲಿಪಾಟೀಲ್, ಸುರೇಶಗೌಡ ಶಿವನಗೌಡ್ರ, ವಿರೂಪಾಕ್ಷಿ ಗಂಧದ ಸೇರಿದಂತೆ ಇನ್ನಿತರರಿದ್ದರು.
--

0/Post a Comment/Comments