ಬೇವೂರು ಹೋಬಳಿಗಾಗಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಭೇಟಿ

ಯಲಬುರ್ಗಾ ತಾಲೂಕಿನ ಬೇವೂರನ್ನು ಹೋಬಳಿ ಕೇಂದ್ರಕ್ಕಾಗಿ ಒತ್ತಾಯಿಸಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಭೇಟಿ ನೀಡಿದರು.
ಬಳಿಕ ಮಾತನಾಡಿ, ಬೇವೂರನ್ನು ಹೋಬಳಿಯನ್ನಾಗಿ ಮಾಡಬೇಕು. ಹುಣಸಿಹಾಳ, ತರಲಕಟ್ಟಿದಲ್ಲಿ ಗ್ರಾಪಂ ರಚನೆ ಮಾಡಬೇಕು. ಬೇವೂರು ಹೋಬಳಿ ಕೇಂದ್ರವಾಗಲು ಸೂಕ್ತ ಸ್ಥಳವಾಗಿದೆ. ಹೋಬಳಿ ಹೋರಾಟಕ್ಕೆ  ಸುತ್ತಮುತ್ತಲಿನ ಗ್ರಾಮದ ಜನರನ್ನು ಸಂಘಟಿಸಿ ಹೋರಾಟ ಮಾಡಬೇಕು. ಇದಕ್ಕೆ ಜೆಡಿಎಸ್‌ನಿಂದ ಬೆಂಬಲ ನೀಡುತ್ತೇವೆ. ಸಚಿವ ಹಾಲಪ್ಪ ಆಚಾರ್ ಬೇವೂರು ಹೋಬಳಿ ಘೋಷಣೆ ಮಾಡಿಸಬೇಕು. ಘೋಷಣೆ ಮಾಡುವವರೆಗೂ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿಸಬೇಕಾಗುತ್ತದೆ ಎಂದರು. ಕುಷ್ಟಗಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಯಕ ಮಾತನಾಡಿದರು.
ಈ ಸಂದರ್ಭ ಹೋರಾಟ ಸಮಿತಿ ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ, ಕುಷ್ಟಗಿ ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ, ಪ್ರಮುಖರಾದ ಸಿದ್ದು ಮಣ್ಣಿನವರ್, ಶ್ರೀಕಾಂತಗೌಡ ಮಾಲಿಪಾಟೀಲ್, ಶರಣಪ್ಪ ರಾಂಪುರ, ಹನುಮಂತಪ್ಪ ಗುರಿಕಾರ, ಬಸವರಾಜ ಬೊಮ್ಮನಾಳ, ದ್ಯಾಮಣ್ಣ ಪೂಜಾರ, ಹನುಮೇಶ ಕೋನನಗೌಡ್ರ, ಶಿವಶಂಕರಪ್ಪ ಕುರಿ, ಸಂಗಪ್ಪ ಗೊಂದಿ, ಮಲ್ಲಪ್ಪ ಭಾವಿಕಟ್ಟಿ, ನಾರಾಯಣ ಜನಾದ್ರಿ ಸೇರದಿಂತೆ ಇನ್ನಿತರರಿದ್ದರು.

0/Post a Comment/Comments