*ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ*
ಯಲಬುರ್ಗಾ: ತಾಲೂಕಿನ ಕುಡಗುಂಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನು ಆಚರಿಸಲಾಯಿತು.
ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಗುರುಗಳಾದ ನಿಂಗಪ್ಪ ನಡುಲಮನಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆ ಸ್ವಾತಂತ್ರ್ಯ ಹೋರಾಟಗಾರ, ಹಸಿರುಕ್ರಾಂತಿಯ ಹರಿಕಾರ ಬಾಬೂಜಿ ಅವರು ದೇಶಕ್ಕಾಗಿ ನೀಡಿದ ಕೊಡುಗೆಗಳು ಅಪಾರ. ಇಂತಹ ಮಹಾನ್ ನಾಯಕರ ಆದರ್ಶ, ಚಿಂತನೆಗಳು ಇಂದಿಗೂ ದಾರಿ ದೀಪವಾಗಿವೆ. ಶೋಷಿತರ ದಮನಿತರ ಪರವಾಗಿ ಹೋರಾಟ ನಡೆಸಿದ ಮಾಜಿ ಉಪ ಪ್ರಧಾನಮಂತ್ರಿ ಶ್ರೀ ಬಾಬು ಜಗಜೀವನ ರಾಮ್ ಅವರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು. ಕೃಷಿ, ರಕ್ಷಣಾ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾದದ್ದು ಎಂದು ಹೇಳಿದರು ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಶರಣಪ್ಪ ಇಟಗಿ,ಗುಂಡಪ್ಪ ಅಸೂಟಿ,ಮಹಲಿಂಗಪ್ಪ ಉಳ್ಳಾಗಡ್ಡಿ, ಸಕ್ರಪ್ಪ ಕುಂಟ್ರು,ಎಸ್ ಆರ್,ಬಾಗಲಿ ಶಿಕ್ಷಕರ ಸೇರಿದಂತೆ ಯುವ ಮುಖಂಡರಾದ ಬಸವರಾಜ ಬೊಮ್ಮನಾಳ, ಶರಣಪ್ಪ ಮೇಟಿ ಇದ್ದರು
Post a Comment