ಕೊಪ್ಪಳ:ನವಲಿ ಬಳಿ ಟ್ರಾಕ್ಟರ್ ಪಲ್ಟಿ : ನಿಶ್ಚಿತಾರ್ಥಕ್ಕೆ ಬದಲು ಮಸಣಕ್ಕೆ ಸೇರಿದ ನಾಲ್ವರು
ಕೊಪ್ಪಳ : ಜಿಲ್ಲೆಯ ಕಾರಟಗಿ ತಾಲೂಕಿನ ನವಲಿ ಗ್ರಾಮದ ರೈಸ್ ಟೆಕ್ನಾಲಜಿ ಪಾರ್ಕ ಬಳಿ ಟ್ರ್ಯಾಕ್ಟರವೊಂದು ಪಲ್ಟಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಯಮನೂರಪ್ಪ ಸಿಂಧನೂರು (55), ಅಂಬಮ್ಮ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದ್ಯಾಮಮ್ಮ (60) ಶೇಶಪ್ಪ ಬಂಡಿ (40) ಇವರಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಇಂದಿರಾನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರಟಗಿಯಿಂದ ಕನಕಗಿರಿ ತಾಲೂಕಿನ ಶಿರವಾರ ಗ್ರಾಮಕ್ಕೆ ಮದುವೆ ನಿಶ್ಚಯ ಮಾಡಲು ಹೊರಟಿದ್ದ ಟ್ರ್ಯಾಕ್ಟರ್ ಆಯ ತಪ್ಪಿ ಪಲ್ಟಿಯಾಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಸ್ಪಷ್ಟಪಡಿಸಿದ್ದಾರೆ. ಗಾಯಾಳುಗಳನ್ನು ಕಾರಟಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
Post a Comment